ಕರ್ನಾಟಕದ ಕೃಷಿ ಇಲಾಖೆಯಲ್ಲಿ ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶ ಎದುರಾಗಿದೆ. ಕೃಷಿ ಇಲಾಖೆ ನೇಮಕಾತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 945 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಭರ್ತಿಗಾಗಿ ಪರಿಷ್ಕೃತ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯು ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದ (RPC) ಎರಡಕ್ಕೂ ಅನ್ವಯಿಸುತ್ತದೆ.

ಈ ನೇಮಕಾತಿಯ ಸಂಪೂರ್ಣ ವಿವರಗಳು, ಹುದ್ದೆಗಳ ವರ್ಗೀಕರಣ, ವಿದ್ಯಾರ್ಹತೆ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಕೆಳಗಿನಂತಿದೆ.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ:
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು | ಮಾಸಿಕ ವೇತನ ಶ್ರೇಣಿ |
| ಕೃಷಿ ಅಧಿಕಾರಿ (AO) | 118 | ₹69,250 – ₹1,34,200 |
| ಸಹಾಯಕ ಕೃಷಿ ಅಧಿಕಾರಿ (AAO) | 809 | ₹65,950 – ₹1,24,900 |
| ವಿಶೇಷ ಮೀಸಲಾತಿ (PwD) | 18 | ಹುದ್ದೆಗೆ ಅನುಗುಣವಾಗಿ |
| ಒಟ್ಟು ಹುದ್ದೆಗಳು | 945 |
ಪ್ರಮುಖ ಅರ್ಹತೆಗಳು
- ವಿದ್ಯಾರ್ಹತೆ (Educational Qualification)
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಈ ಕೆಳಗಿನ ಪದವಿಗಳನ್ನು ಹೊಂದಿರಬೇಕು:
- ಬಿ.ಎಸ್ಸಿ. (ಕೃಷಿ) / ಬಿ.ಎಸ್ಸಿ. (ಆನರ್ಸ್) ಕೃಷಿ
- ಬಿ.ಟೆಕ್ / ಬಿ.ಇ (ಆಹಾರ ತಂತ್ರಜ್ಞಾನ / ಆಹಾರ ವಿಜ್ಞಾನ / ಕೃಷಿ ಎಂಜಿನಿಯರಿಂಗ್ / ಜೈವಿಕ ತಂತ್ರಜ್ಞಾನ) ಅಥವಾ ಕೃಷಿ ಇಲಾಖೆ ಸೂಚಿಸಿರುವ ಸಂಬಂಧಿತ ಪದವಿಗಳು.
- ವಯೋಮಿತಿ (Age Limit)
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ವರ್ಗಾವಾರು ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷಗಳು
- ಒಬಿಸಿ ಅಭ್ಯರ್ಥಿಗಳು (2A, 2B, 3A, 3B): ಗರಿಷ್ಠ 43 ವರ್ಷಗಳು
- SC / ST / ಪ್ರವರ್ಗ-1 ಅಭ್ಯರ್ಥಿಗಳು: ಗರಿಷ್ಠ 45 ವರ್ಷಗಳು
ಅರ್ಜಿ ಶುಲ್ಕದ ವಿವರ
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
| ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳು (OBC) | ₹750 |
| SC / ST / ಪ್ರವರ್ಗ-1 / ಮಾಜಿ ಸೈನಿಕರು | ₹500 |
| ಅಂಗವಿಕಲ (PwD) ಅಭ್ಯರ್ಥಿಗಳು | ₹250 (ಪ್ರಕ್ರಿಯೆ ಶುಲ್ಕ ಮಾತ್ರ) |
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಾಂಕಗಳು
ಅಭ್ಯರ್ಥಿಗಳನ್ನು ಆಫ್ಲೈನ್ ಓಎಂಆರ್ (OMR) ಆಧಾರಿತ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (ಪತ್ರಿಕೆ 1 ಮತ್ತು ಪತ್ರಿಕೆ 2) ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯೂ ಇರಲಿದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.75 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರಲಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.
1.ಅರ್ಜಿ ಸಲ್ಲಿಕೆ ಆರಂಭ:30 ಮೇ 2026.
KEA ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
2.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20 ಜೂನ್ 2026.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ದಿನಾಂಕದೊಳಗೆ ಆನ್ಲೈನ್ ಫಾರ್ಮ್ ಭರ್ತಿ ಮಾಡಬೇಕು.
3.ಶುಲ್ಕ ಪಾವತಿಗೆ ಕೊನೆಯ ದಿನ:22 ಜೂನ್ 2026.
ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಕಡೆ ದಿನ.
4.ಲಿಖಿತ ಪರೀಕ್ಷೆ (KK ವೃಂದ):25 ಜುಲೈ 2026.
ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
5.ಲಿಖಿತ ಪರೀಕ್ಷೆ (RPC ವೃಂದ):26 ಜುಲೈ 2026.
ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
ಗಮನಿಸಿ: ಕೃಷಿ ಇಲಾಖೆ ನೇಮಕಾತಿ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವಾದ https://cetonline.karnataka.gov.in/kea/ ಗೆ ಭೇಟಿ ನೀಡಬಹುದು. ಕೊನೆಯ ದಿನದ ರಶ್ ತಪ್ಪಿಸಲು ಇಂದೇ ಅರ್ಜಿ ಸಲ್ಲಿಸಿ.
ಕೃಷಿ ಇಲಾಖೆಯ ಈ ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆ ಮತ್ತು ಹಳೆಯ ಅಧಿಸೂಚನೆ ರದ್ದಾಗಲು ಕಾರಣಗಳೇನು ಎಂಬುದನ್ನು ತಿಳಿಯಲು ಕೃಷಿ ಅಧಿಕಾರಿಗಳ ನೇಮಕಾತಿ ವಿವರಣೆ ವೀಡಿಯೊ ವೀಕ್ಷಿಸಬಹುದು, ಇದರಲ್ಲಿ ಇಲಾಖೆಯ ನಿರ್ಧಾರಗಳ ಕುರಿತು ಸಂಪೂರ್ಣ ಮಾಹಿತಿ ಇದೆ.
follow us on – Telegram
follow us on – whattsapp